ನಮಸ್ಕಾರ ಸ್ನೇಹಿತರೆ ಕರ್ನಾಟಕದ ಯುವಕರಿಗಾಗಿ ಮತ್ತೊಮ್ಮೆ ಮಹತ್ವದ ಅವಕಾಶ ಲಭ್ಯವಾಗಿದೆ. Karnataka State Road Transport Corporation (KSRTC) ವತಿಯಿಂದ ಉಚಿತ ಹೆವಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ.
ಹೌದು ಯಾವುದೇ ತರಬೇತಿ ಶುಲ್ಕವಿಲ್ಲದೆ, ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ, ಅಧಿಕೃತ ಭಾರಿ ವಾಹನ ಚಾಲನಾ ಪರವಾನಗಿ (Heavy Vehicle Driving License) ಪಡೆಯುವ ಅವಕಾಶ ಇದಾಗಿದೆ. ಸರ್ಕಾರಿ ಬೆಂಬಲದ ಈ ಕಾರ್ಯಕ್ರಮವು ಸಾರಿಗೆ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ವಿಶೇಷವಾಗಿ ಉಪಯುಕ್ತವಾಗಿದೆ ಅಂತ ಹೇಳಬಹುದು.
ಪ್ರಸ್ತುತ ಈ ಯೋಜನೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ PM-AJAY ಯೋಜನೆಯಡಿ ಪರಿಶಿಷ್ಟ ಜಾತಿ (SC) ವರ್ಗದ ಅಭ್ಯರ್ಥಿಗಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ರಾಜ್ಯದ ವಿವಿಧ ತರಬೇತಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಭ್ಯರ್ಥಿಗಳು ತಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡ ಏನೇನು:
ಶೈಕ್ಷಣಿಕ ಅರ್ಹತೆ:
ಕನಿಷ್ಠ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತೆ.
ವಯೋಮಿತಿ
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟು ಇರಬೇಕು.
ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯಿಸುತ್ತದೆ.
ತರಬೇತಿಯ ಸೌಲಭ್ಯಗಳು ಮತ್ತು ಪ್ರಯೋಜನಗಳು:
ಸಂಪೂರ್ಣ ಉಚಿತ ತರಬೇತಿ
ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸಹ ಇರುತ್ತೆ.
ತರಬೇತಿ ಪೂರ್ಣಗೊಳಿಸಿದ ಬಳಿಕ RTO ಸಹಯೋಗದೊಂದಿಗೆ ಹೆವಿ ವಾಹನ DL ಸಿಗುತ್ತೆ.
ಅನುಭವಿಗಳಾದ KSRTC ತರಬೇತುದಾರರಿಂದ ಪ್ರಾಯೋಗಿಕ ಮತ್ತು ತಾಂತ್ರಿಕ ಮಾರ್ಗದರ್ಶನ ದೊರೆಯುತ್ತದೆ.
ಈ ತರಬೇತಿ ಮೂಲಕ ಯುವಕರು ಭಾರಿ ವಾಹನ ಚಾಲನಾ ಕೌಶಲ್ಯಗಳನ್ನು ಪಡೆದು, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉತ್ತಮ ವೇತನದ ಉದ್ಯೋಗಗಳಿಗೆ ಅರ್ಹರಾಗುತ್ತಾರೆ.
ಆಯ್ಕೆ ಪ್ರಕ್ರಿಯೆ ಹೇಗೆ:
ಅರ್ಜಿ ಪರಿಶೀಲನೆ
ದಾಖಲೆ ಪರಿಶೀಲನೆ
ಅರ್ಹ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ಮಾಹಿತಿ
ತರಬೇತಿಗೆ ಪ್ರವೇಶ
ಲಿಖಿತ ಪರೀಕ್ಷೆ ಇಲ್ಲ. ಸಂದರ್ಶನ ಇಲ್ಲ. ಅರ್ಹತೆ ಆಧಾರಿತ ಆಯ್ಕೆ ಆಗಿರುತ್ತದೆ.
ಬೇಕಾದ ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್
ಜಾತಿ ಪ್ರಮಾಣಪತ್ರ
SSLC ಅಂಕಪಟ್ಟಿ
ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
LMV ಚಾಲನಾ ಲೈಸೆನ್ಸ್ (ಇದ್ದರೆ ಉತ್ತಮ)
ಇನ್ನು ಹೆಚ್ಚಿನ ಮಾಹಿತಿ ಕೇಳಿದರೆ ನೀಡಬೇಕು.
ಅರ್ಜಿ ಸಲ್ಲಿಸುವ ವಿಧಾನ
ಆನ್‌ಲೈನ್ ಮೂಲಕ
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹೊಸ ನೋಂದಣಿ ಮಾಡಿ.
ಅಗತ್ಯ ವಿವರಗಳನ್ನು ಭರ್ತಿ ಮಾಡಿ.
ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ಪಡೆಯಿರಿ.
ಆಫ್‌ಲೈನ್ ಮೂಲಕ
ಹತ್ತಿರದ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅಥವಾ ಅಧಿಕೃತ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಆನ್ಲೈನ್ ಮೂಲಕ.
ದೊರೆಯುವ ಉದ್ಯೋಗ ಅವಕಾಶಗಳು:
ನೋಡಿ ತರಬೇತಿ ಪೂರ್ಣಗೊಂಡ ನಂತರ:
KSRTC ಮತ್ತು ಇತರೆ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶಗಳು ದೊರೆಯುತ್ತದೆ.
ಖಾಸಗಿ ಬಸ್ ಕಂಪನಿಗಳು
ಲಾರಿ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳು
ಪ್ರವಾಸೋದ್ಯಮ ಕ್ಷೇತ್ರ
ಭಾರಿ ವಾಹನ ಚಾಲಕರಿಗೆ ದೇಶದಾದ್ಯಂತ ಹೆಚ್ಚಿನ ಬೇಡಿಕೆ ಇದೆ.
ಅರ್ಜಿ ಸಲ್ಲಿಸಲು ಸಹಾಯವಾಣಿ ಸಂಖ್ಯೆಗಳು
ಮಳವಳ್ಳಿ: 7760990137
ಹಾಸನ: 7760990533
ಹೊಳಲ್ಕೆರೆ: 7019072560
ಮಾಲೂರು: 7760994432
ಚಿಕ್ಕಮಗಳೂರು: 9606037746
ಅರ್ಜಿ ಮುಖ್ಯ ದಿನಾಂಕ
ಸಾಮಾನ್ಯವಾಗಿ ಇಂತಹ ತರಬೇತಿ ಅಧಿಸೂಚನೆಗಳಿಗೆ 15 ರಿಂದ 20 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20, 2026ರೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.
ಗಮನಿಸಿ ಫೆಬ್ರವರಿ 20 ಇಲಾಖೆ ನಿಗದಿಪಡಿಸಿರುವ ಕೊನೆಯ ದಿನಾಂಕ ವಾಗಿರುತ್ತದೆ.
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:
ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ.
ಕೊನೆಯ ದಿನದವರೆಗೆ ಕಾಯಬೇಡಿ.
ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಿರಿ.
ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಅನುಮಾನಗಳನ್ನು ನಿವಾರಿಸಿಕೊಳ್ಳಿ ಈಗಾಗಲೇ ಸಹಾಯವಾಣಿ ಈ ಮೇಲ್ಗಡೆ ನೀಡಲಾಗಿದೆ.
ನಮ್ಮ ಕೊನೆಯ ಮಾತು:
ಉದ್ಯೋಗಕ್ಕಾಗಿ ಹುಡುಕುತ್ತಿರುವ ಯುವಕರಿಗೆ KSRTC ಉಚಿತ ಹೆವಿ ವಾಹನ ತರಬೇತಿ ದೊಡ್ಡ ಅವಕಾಶವಾಗಿದೆ. ಯಾವುದೇ ಶುಲ್ಕವಿಲ್ಲದೆ ಕೌಶಲ್ಯಾಭಿವೃದ್ಧಿ ಮಾಡಿ, ಅಧಿಕೃತ ಚಾಲನಾ ಪರವಾನಗಿ ಪಡೆದು, ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಬಹುದು ಹಾಗೆ ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೆ ತಕ್ಷಣ ಅರ್ಜಿ ಸಲ್ಲಿಸಬೇಕು.ಯಾಕಂದ್ರೆ ಕೊನೆ ದಿನಾಂಕ 20 ಫೆಬ್ರವರಿ 2026.
FAQ:
1. ಈ ತರಬೇತಿ ಸಂಪೂರ್ಣ ಉಚಿತವೇ? ಹೌದು, ಯಾವುದೇ ಶುಲ್ಕವಿಲ್ಲ.
2. ಊಟ ಮತ್ತು ವಸತಿ ಸೌಲಭ್ಯ ಇದೆಯೇ? ಹೌದು, ತರಬೇತಿ ಅವಧಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ.
3. ಲಿಖಿತ ಪರೀಕ್ಷೆ ಇದೆಯೇ? ಇಲ್ಲ.
4. ಯಾರು ಅರ್ಜಿ ಸಲ್ಲಿಸಬಹುದು? ಪರಿಶಿಷ್ಟ ಜಾತಿ ವರ್ಗದ ಅರ್ಹ ಅಭ್ಯರ್ಥಿಗಳು.
5. ತರಬೇತಿ ಅವಧಿ ಎಷ್ಟು? ಸುಮಾರು ಒಂದು ತಿಂಗಳು.
6. ಹೆವಿ ವಾಹನ DL ನೀಡಲಾಗುತ್ತದೆಯೇ? ಹೌದು, ತರಬೇತಿ ಪೂರ್ಣಗೊಂಡ ಬಳಿಕ.
7. ವಯೋಮಿತಿ ಏನು? ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟು.
8. LMV ಲೈಸೆನ್ಸ್ ಕಡ್ಡಾಯವೇ? ಇದ್ದರೆ ಉತ್ತಮ, ಆದರೆ ಕಡ್ಡಾಯವಲ್ಲ.
9. ಆಯ್ಕೆ ಹೇಗೆ? ಅರ್ಹತೆ ಮತ್ತು ದಾಖಲೆ ಪರಿಶೀಲನೆ ಆಧಾರಿತ.
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು HAL ಇಂಡಿಯಾ ನಾನ್ ಎಜುಕೇಟಿವ್ ವಿಭಾಗದ ಅಡಿಯಲ್ಲಿ ಡಿಪ್ಲೋಮಾ, 10ನೇ ತರಗತಿ, ಐಟಿಐ ಮತ್ತು ದ್ವಿತೀಯ ಪಿಯುಸಿ ಪಾಸಾಗಿರುವಂತಹ ಅಭ್ಯರ್ಥಿಗಳಿಗೆ ಭರ್ಜರಿ ನೇಮಕಾತಿ ಮಾಡುತ್ತಿದೆ.
ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದ್ದು ಯಾರು ಕೂಡ ಈ ಒಂದು ಲೇಖನವನ್ನು ಓದಬೇಡಿ ಏಕೆಂದರೆ ಸಂಪೂರ್ಣ ಮಾಹಿತಿ ಇರುತ್ತೆ ಇನ್ನು ನೀವು ಬೇರೆ ಕಡೆ ಮಾಹಿತಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿ ಇರುತ್ತೆ.
ನೋಡಿ ನಿಮಗೆ ಸಾಮಾನ್ಯವಾಗಿ ತಿಳಿದಿರಬಹುದು ನಾವು ಯಾವುದೇ ಒಂದು ಸರ್ಕಾರಿ ಹುದ್ದೆಯಾಗಿರಬಹುದು ಅಥವಾ ಪ್ರೈವೇಟ್ ಹುದ್ದೆಯಾಗಿರಬಹುದು ಅರ್ಜಿ ಸಲ್ಲಿಸಲು ಮುಂತಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವವಾಗುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಈ ಕೆಳಗಿನಂತಿದೆ ನೋಡಿ.
HAL ಇಂಡಿಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು ಪ್ರತಿ ತಿಂಗಳ ಸಂಬಳ ಎಷ್ಟು ಅರ್ಜಿ ಸಲ್ಲಿಸಲು ಯಾವುದಾದರೂ ಅರ್ಜಿ ಶುಲ್ಕ ಇರುತ್ತಾ? ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಹಾಗೂ ಕೊನೆಯ ದಿನಾಂಕ ಯಾವುದು..?
ನೋಡಿ ಈ ಮೇಲ್ಕಟಿಸಿರುವ ಹಾಗೆ ಹೀಗೆ ಇದೇ ತರ ಒಂದಲ್ಲ ಎರಡಲ್ಲ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲು ಇರುತ್ತೆ ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ಈ ಕೆಳಗಡೆ ನಿಮಗಂತಲೇ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಾಹಿತಿಯಂತೆ ನೀವು ಅರ್ಥ ಮಾಡಿ ಕೊಂಡಿದ್ದೆ ಆದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ನಮ್ಮ ಭಾರತದ ಪ್ರತಿಷ್ಠಿತ ಸರ್ಕಾರಿ ಏರೋಸ್ಪೇಸ್ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ 2026ನೇ ಸಾಲಿಗೆ ಸಂಬಂಧಿಸಿದಂತೆ ನಾನ್-ಎಕ್ಸಿಕ್ಯೂಟಿವ್ ವಿಭಾಗದಲ್ಲಿ 151 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ನೇಮಕಾತಿಯು ಡಿಪ್ಲೊಮಾ, ITI, 10ನೇ ಮತ್ತು 12ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಅತ್ಯುತ್ತಮ ಸರ್ಕಾರಿ ಉದ್ಯೋಗದ ಅವಕಾಶವನ್ನು ಒದಗಿಸುತ್ತದೆ ಅಂತ ಹೇಳಬಹುದು.
ನೋಡಿ ಬೆಂಗಳೂರಿನಲ್ಲಿ ಇದರ ಪ್ರಧಾನ ಕಚೇರಿಯಲ್ಲಿ ಮುಖ್ಯವಾಗಿ ಕೆಲಸದ ಅವಕಾಶ ದೊರೆತಿದೆ ಅಂದರೆ ಹುದ್ದೆಗಳು ಬೆಂಗಳೂರಿನಲ್ಲಿ ಖಾಲಿ ಇದೆ ಹೀಗಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ ಒಂದು ಖುಷಿ ಸಂಗತಿ ಅಂತ ಹೇಳಬಹುದು ನೀವೇನಾದರೂ ಹುದ್ದೆಗಳಿಗೆ ಆಯ್ಕೆಯಾದರೆ ಬೆಂಗಳೂರಿನಲ್ಲಿ ನಿಮಗೆ ಉದ್ಯೋಗ ಸಿಗುತ್ತೆ, ದೇಶದಾದ್ಯಂತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇತ್ತೀಚಿನ ದಿನಗಳಲ್ಲಿ ಖಾಸಗಿ ಉದ್ಯೋಗಗಳಲ್ಲಿ ಅಸ್ಥಿರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, HAL ನಲ್ಲಿ ದೊರೆಯುವ ಸರ್ಕಾರಿ ಉದ್ಯೋಗ ಭದ್ರತೆ, ಉತ್ತಮ ಸಂಬಳ, ಭವಿಷ್ಯದ ವೃತ್ತಿ ಬೆಳವಣಿಗೆ ಮತ್ತು ಪಿಂಚಣಿ ಸೌಲಭ್ಯಗಳು ಯುವಕರಿಗೆ ಅತ್ಯಂತ ಆಕರ್ಷಕವಾಗಿವೆ ಅಂತ ಹೇಳಬಹುದು ಏಕೆಂದರೆ ಒಂದು ಬಾರಿ ಆಯ್ಕೆಯಾದರೆ ಲೈಫ್ ಸೆಟಲ್ ಅಂತ ಹೇಳಬಹುದು.
ಈ ನೇಮಕಾತಿಯ ಮೂಲಕ ಡಿಪ್ಲೊಮಾ ಟೆಕ್ನಿಷಿಯನ್, ITI ಟೆಕ್ನಿಷಿಯನ್, ಫೈರ್‌ಮ್ಯಾನ್, ಸೆಕ್ಯುರಿಟಿ ಗಾರ್ಡ್ ಮತ್ತು ಏರ್‌ಕ್ರಾಫ್ಟ್ ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ತಾಂತ್ರಿಕ ಶಿಕ್ಷಣ ಪಡೆದವರಿಗೆ ಮಾತ್ರವಲ್ಲದೆ, ಸಾಮಾನ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಹ ಉತ್ತಮ ಅವಕಾಶ ಇದಾಗಿದೆ.
ಕಡಿಮೆ ವಿದ್ಯಾರ್ಹತೆಯಲ್ಲೇ ಉತ್ತಮ ಸಂಬಳ, ಕೇಂದ್ರ ಸರ್ಕಾರದ ಸಂಸ್ಥೆಯ ಉದ್ಯೋಗ ಭದ್ರತೆ ಮತ್ತು ಗೌರವಯುತ ಹುದ್ದೆ ಇದಾಗಿದೆ ಈ ಮೂರು ಅಂಶಗಳು ಈ HAL ನೇಮಕಾತಿಯನ್ನು ಉದ್ಯೋಗಾಕಾಂಕ್ಷಿಗಳಿಗೆ ಅತ್ಯಂತ ಮಹತ್ವದ ಅವಕಾಶವಾಗಿಸುತ್ತವೆ.
ಅಭ್ಯರ್ಥಿಗಳೇ ಗಮನಿಸಿ ನೋಡಿ ಈ ನೇಮಕಾತಿಯಲ್ಲಿ ಒಟ್ಟು 151 ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಭರ್ತಿಯಾಗಲಿವೆ.
ಹುದ್ದೆಯ ಹೆಸರು
ಅಂದಾಜು ಹುದ್ದೆಗಳು
ಡಿಪ್ಲೊಮಾ ಟೆಕ್ನಿಷಿಯನ್
40
ಟೆಕ್ನಿಷಿಯನ್ (ITI)
60
ಫೈರ್‌ಮ್ಯಾನ್
20
ಸೆಕ್ಯುರಿಟಿ ಗಾರ್ಡ್
15
ಏರ್‌ಕ್ರಾಫ್ಟ್ ಟೆಕ್ನಿಷಿಯನ್
16
ಒಟ್ಟು
151
ಅಭ್ಯರ್ಥಿಗಳಿಗೆ ವಿಶೇಷ ಸೂಚನೆ: ನಿಖರ ಹುದ್ದೆಗಳ ವಿವರ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ವಿಭಾಗವಾರು ಹಾಗೂ ವರ್ಗವಾರು ಹುದ್ದೆಗಳ ಸಂಖ್ಯೆಯಲ್ಲಿ ಸ್ವಲ್ಪ ಬದಲಾವಣೆ ಸಾಧ್ಯ.
ಅರ್ಹತಾ ಮಾನದಂಡಗಳು:
ಪ್ರಸ್ತುತ ಈ ಕೆಳಗಡೆ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತಾ ಮಾನದಂಡಗಳು ಇರಬೇಕು ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಹಾಗೆ ವಯೋಮಿತಿ ಎಷ್ಟಿರಬೇಕು ಅಂದರೆ ಅರ್ಜಿ ಸಲ್ಲಿಸಲು ನಮ್ಮ ವಯಸ್ಸು ಎಷ್ಟಿರಬೇಕು ಎಂಬ ಮಾಹಿತಿ ನೀವು ತಿಳಿದುಕೊಳ್ಳಬೇಕು ಹೀಗಾಗಿ ನಿಮಗಂದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಶೈಕ್ಷಣಿಕ ಅರ್ಹತೆ
ಡಿಪ್ಲೊಮಾ ಟೆಕ್ನಿಷಿಯನ್:
ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ / ಸಿವಿಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಆಟೋಮೊಬೈಲ್ / ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಟೆಕ್ನಿಷಿಯನ್ (ITI):
10ನೇ ತರಗತಿ ಪಾಸ್ + ಸಂಬಂಧಿತ ಟ್ರೇಡ್‌ನಲ್ಲಿ ITI + NAC/NTC ಪ್ರಮಾಣಪತ್ರ.
ಫೈರ್‌ಮ್ಯಾನ್ / ಸೆಕ್ಯುರಿಟಿ ಗಾರ್ಡ್:
10ನೇ ಅಥವಾ 12ನೇ ತರಗತಿ ಪಾಸ್
ಉತ್ತಮ ದೈಹಿಕ ಸಾಮರ್ಥ್ಯ ಕಡ್ಡಾಯ ವಾಗಿರುತ್ತದೆ.
ಏರ್‌ಕ್ರಾಫ್ಟ್ ಟೆಕ್ನಿಷಿಯನ್:
ಸಂಬಂಧಿತ ತಾಂತ್ರಿಕ ವಿದ್ಯಾರ್ಹತೆ / ITI / ಡಿಪ್ಲೊಮಾ.
ವಯೋಮಿತಿ:
ವರ್ಗ
ಗರಿಷ್ಠ ವಯಸ್ಸು
ಸಾಮಾನ್ಯ / EWS
28 ವರ್ಷ
OBC
31 ವರ್ಷ (3 ವರ್ಷ ಸಡಿಲಿಕೆ)
SC / ST
33 ವರ್ಷ (5 ವರ್ಷ ಸಡಿಲಿಕೆ)
PwBD
38 ವರ್ಷ (10 ವರ್ಷ ಸಡಿಲಿಕೆ)
ಸಂಬಳ ಮತ್ತು ಸೌಲಭ್ಯಗಳು:
HAL ಸಂಸ್ಥೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸರಾಸರಿ ₹21,000 ರಿಂದ ₹23,000 ವರೆಗೆ ಸಂಬಳ ದೊರೆಯುತ್ತದೆ. ಜೊತೆಗೆ ಸರ್ಕಾರದ ನಿಯಮಾನುಸಾರ ಹಲವಾರು ಭತ್ಯೆಗಳು ಲಭ್ಯ ಎಲ್ಲ ಭತ್ಯೆಗಳ ವಿವರ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
ಸಂಬಳ ವಿವರ:
ಮೂಲ ವೇತನ
ಡಿಯರ್ನೆಸ್ ಅಲವಾನ್ಸ್ (DA)
ಮನೆ ಬಾಡಿಗೆ ಭತ್ಯೆ (HRA)
ಪ್ರಯಾಣ ಭತ್ಯೆ (TA)
ವೈದ್ಯಕೀಯ ಸೌಲಭ್ಯ
ಪಿಎಫ್ ಮತ್ತು ಪಿಂಚಣಿ ಯೋಜನೆ
ಉದ್ಯೋಗ ಭದ್ರತೆ
ವೃತ್ತಿ ಬೆಳವಣಿಗೆಯೊಂದಿಗೆ ಈ ಕೆಳಗಿನ ಮಾಹಿತಿ ಕೂಡ ಗಮನಿಸಬಹುದು:
ಸೇವಾ ಅವಧಿಯೊಂದಿಗೆ ಪದೋನ್ನತಿ
ಇಲಾಖೆಯೊಳಗಿನ ತರಬೇತಿ
ಶಾಶ್ವತ ಹುದ್ದೆಗೆ ಪರಿವರ್ತನೆಯ ಅವಕಾಶ
ಅರ್ಜಿ ಶುಲ್ಕ ಪಟ್ಟಿ:
ವರ್ಗ
ಶುಲ್ಕ
ಸಾಮಾನ್ಯ / OBC / EWS
ಬಹುಶಃ ಶೂನ್ಯ / ಅಲ್ಪ ಶುಲ್ಕ
SC / ST / PwBD
ಯಾವುದೇ ಶುಲ್ಕವಿಲ್ಲ
ಸೂಚನೆ: ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಅಂತಿಮ ದೃಢೀಕರಣ ಮಾಡಿಕೊಳ್ಳಿ.
ಆಯ್ಕೆ ಪ್ರಕ್ರಿಯೆ:
HAL ನೇಮಕಾತಿಯ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕ ಮತ್ತು ಹಂತವಾರು ನಡೆಯುತ್ತದೆ.
ಹಂತಗಳು:
ಲಿಖಿತ ಪರೀಕ್ಷೆ (Written Test) – ಎಲ್ಲಾ ಹುದ್ದೆಗಳಿಗೂ ಕಡ್ಡಾಯ
ದೈಹಿಕ ಪರೀಕ್ಷೆ (Physical Test) – ಫೈರ್‌ಮ್ಯಾನ್ ಮತ್ತು ಸೆಕ್ಯುರಿಟಿ ಗಾರ್ಡ್ ಹುದ್ದೆಗೆ ಮಾತ್ರ
ದಾಖಲೆ ಪರಿಶೀಲನೆ (Document Verification)
ವೈದ್ಯಕೀಯ ಪರೀಕ್ಷೆ (Medical Test)
ಅಂತಿಮ ಮೆರಿಟ್ ಪಟ್ಟಿ
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ:
ಪರೀಕ್ಷಾ ಮಾದರಿ:
ಪ್ರಶ್ನೆಗಳ ಸಂಖ್ಯೆ: 100
ಒಟ್ಟು ಅಂಕಗಳು: 100
ಅವಧಿ: 2 ಗಂಟೆ
ನೆಗೆಟಿವ್ ಮಾರ್ಕಿಂಗ್: ಇರಬಹುದು
ವಿಷಯಗಳು:
ಸಾಮಾನ್ಯ ಜ್ಞಾನ
ತಾಂತ್ರಿಕ ವಿಷಯ (ಸಂಬಂಧಿತ ಟ್ರೇಡ್)
ಗಣಿತ
ಲಾಜಿಕಲ್ ರೀಸನಿಂಗ್
ಮೂಲ ಇಂಗ್ಲಿಷ್
ಪರೀಕ್ಷೆ ತಯಾರಿ ಸಲಹೆಗಳು:
ಪ್ರತಿದಿನ ಕನಿಷ್ಠ 3 ಗಂಟೆ ಅಧ್ಯಯನ
ಹಳೆಯ ಪ್ರಶ್ನೆ ಪತ್ರಿಕೆಗಳ ಅಭ್ಯಾಸ
ಮಾಕ್ ಟೆಸ್ಟ್ ಬರೆಯುವುದು
ನೋಡಿ ದಯವಿಟ್ಟು ಗಮನಿಸಿ ನೀವೇನಾದರೂ ಖಂಡಿತವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳುವುದಾದರೆ ದಯವಿಟ್ಟು ಒಂದು ಬಾರಿ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಚೆಕ್ ಮಾಡಿ ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಇರುತ್ತೆ ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮದ ಕುರಿತು.
ಇತರೆ ಗುರುತಿನ ದಾಖಲೆ ಒಂದು ವೇಳೆ ಕೇಳಿದರೆ ನೀವು ತಪ್ಪದೆ ನೀಡಬೇಕು.
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:
ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಸಿದ್ಧವಾಗಿರಿಸಿ
ಕೊನೆಯ ದಿನದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸಿ
ಪರೀಕ್ಷೆಗೆ ಕನಿಷ್ಠ 30 ದಿನಗಳ ತಯಾರಿ ಯೋಜನೆ ರೂಪಿಸಿಕೊಳ್ಳಿ ಇದು ಬಹಳ ಉತ್ತಮ ಆಗಿರುತ್ತೆ ಪರೀಕ್ಷೆ ದೃಷ್ಟಿಯಿಂದ.
ನಮ್ಮ ಕೊನೆಯ ಮಾತು:
HAL India Non-Executive Recruitment 2026 ಯುವಕರಿಗೆ ಅತ್ಯುತ್ತಮ ಸರ್ಕಾರಿ ಉದ್ಯೋಗದ ಬಾಗಿಲು ತೆರೆದಿದೆ ಅಂತ ಹೇಳಬಹುದು. ಕಡಿಮೆ ವಿದ್ಯಾರ್ಹತೆಯಲ್ಲೇ ಗೌರವಯುತ ಉದ್ಯೋಗ, ಉತ್ತಮ ಸಂಬಳ, ಉದ್ಯೋಗ ಭದ್ರತೆ ಮತ್ತು ಭವಿಷ್ಯದ ಬೆಳವಣಿಗೆ ಈ ಎಲ್ಲಾ ಅಂಶಗಳು ಈ ನೇಮಕಾತಿಯನ್ನು ಅತ್ಯಂತ ಮೌಲ್ಯಮಯವಾಗಿಸುತ್ತವೆ ಅಂತ ಹೇಳಬಹುದು.
ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 25 ಫೆಬ್ರವರಿ 2026 ಕ್ಕೆ ಮುನ್ನವೇ ಅರ್ಜಿ ಸಲ್ಲಿಸಿ.
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು RRB Group D 22,195 ಬೃಹತ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಅಥವಾ ಮುಂದಾದರೆ ನೋಡಿ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಈ ಲೇಖನವನ್ನ ಅರ್ಧಂಬರ್ಧ ಓದಬೇಡಿ ಏಕೆಂದರೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹೀಗಾಗಿ ಈ ಒಂದು ಲೇಖನವನ್ನ ಗಮನವಿಟ್ಟು ಕೊನೆವರೆಗೂ ಓದಿ ನಂತರವೇ ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಕೆಲಸ ಸಾಮಾನ್ಯವಾಗಿ ತಿಳಿದಿರಬಹುದು ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿಯಿಂದ ಹಿಡಿದು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಇರಬೇಕು ಹಾಗೆ ಪ್ರತಿಯೊಂದು ವಿಷಯದ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ ಇಷ್ಟೆ ಅಲ್ಲದೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟ್ ವೆಬ್ಸೈಟ್ ಲಿಂಕ್ ಹಾಗೆ ನೋಟಿಫಿಕೇಶನ್ ಪಿಡಿಎಫ್ ಲಿಂಕನ್ನು ಒದಗಿಸಲಾಗಿದೆ.
ಸ್ನೇಹಿತರೆ ಇದು ನಿಮಗೂ ಸಹ ತಿಳಿದಿರಬಹುದು ಹಾಗೆ ಮನಸ್ಸಿನಲ್ಲಿ ಇತರ ಅನಿಸುತ್ತೆ ನಿಮಗೂ ಸಹ ಅದೇನೆಂದರೆ ಭಾರತೀಯ ರೈಲ್ವೇಯಲ್ಲಿ ಶಾಶ್ವತ ಸರ್ಕಾರಿ ಉದ್ಯೋಗ ಪಡೆಯುವ ಕನಸು ಲಕ್ಷಾಂತರ ಯುವಕರ ಕನಸಾಗಿರುತ್ತೆ ಅದರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ ಹುದ್ದೆಯನ್ನು ಪಡೆದುಕೊಳ್ಳಬೇಕು ಅಂತ. ಆ ಕನಸಿಗೆ 2026ನೇ ವರ್ಷ ದೊಡ್ಡ ಅವಕಾಶವನ್ನು ತಂದಿದೆ. ಏಕೆಂದರೆ ಪ್ರಸ್ತುತ Railway Recruitment Board (RRB) ಅಧಿಕೃತವಾಗಿ RRB Group D (Level 1) Recruitment 2026 ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, CEN 09/2025 ಅಡಿಯಲ್ಲಿ ದೇಶದ ವಿವಿಧ ರೈಲ್ವೇ ವಲಯಗಳಿಗೆ ಒಟ್ಟು 22,195 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ.
ಈ ನೇಮಕಾತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾದರೆ, ರೈಲ್ವೇ Group D ಉದ್ಯೋಗದ ಸ್ವಭಾವವನ್ನು ಗಮನಿಸಬೇಕು. ಇದು ಕೇವಲ ಕೆಲಸವಲ್ಲ; ಉದ್ಯೋಗ ಭದ್ರತೆ, ಪಿಂಚಣಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಕುಟುಂಬ ಭದ್ರತೆ ಮತ್ತು ದೀರ್ಘಕಾಲೀನ ವೃತ್ತಿ ಬೆಳವಣಿಗೆಯನ್ನು ಒದಗಿಸುವ ಕೇಂದ್ರ ಸರ್ಕಾರಿ ಸೇವೆ. ವಿಶೇಷವಾಗಿ SSLC, ITI ಅಥವಾ NAC ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯಂತ ವಾಸ್ತವಿಕ ಅವಕಾಶವಾಗಿದೆ ಅಂತ ಹೇಳಬಹುದು.
ವಿಶೇಷವಾಗಿ ಹಾಗೂ ಗಾನ ಬಿಟ್ಟು ಗಮನಿಸಿ ಇಲ್ಲಿ ನೀವು ಭಾರತದ ಯಾವುದೇ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ All-India Posting ಅನ್ವಯವಾಗುತ್ತದೆ. ಗ್ರಾಮೀಣ ಹಿನ್ನೆಲೆಯ ಅಭ್ಯರ್ಥಿಗಳಿಗೆ ಸಹ ಸಮಾನ ಅವಕಾಶ ಕಲ್ಪಿಸುವುದೇ ಈ ನೇಮಕಾತಿಯ ಪ್ರಮುಖ ವೈಶಿಷ್ಟ್ಯ.
ಪ್ರಮುಖ ಮಾಹಿತಿ:
ವಿಷಯ
ವಿವರ
ನೇಮಕಾತಿ ಸಂಸ್ಥೆ
Railway Recruitment Board (RRB)
ಅಧಿಸೂಚನೆ ಸಂಖ್ಯೆ
CEN 09/2025
ನೇಮಕಾತಿ ಹೆಸರು
RRB Group D (Level 1)
ಉದ್ಯೋಗ ಪ್ರಕಾರ
ಕೇಂದ್ರ ಸರ್ಕಾರಿ ಉದ್ಯೋಗ
ಒಟ್ಟು ಹುದ್ದೆಗಳು
22,195 (ಸುಮಾರು)
ಉದ್ಯೋಗ ಸ್ಥಳ
ಭಾರತದೆಲ್ಲೆಡೆ
ಅರ್ಜಿ ವಿಧಾನ
ಆನ್ಲೈನ್
ಶೈಕ್ಷಣಿಕ ಅರ್ಹತೆ
10ನೇ ತರಗತಿ / ITI / NAC
ವಯೋಮಿತಿ
18 ರಿಂದ 33 ವರ್ಷ
ವೇತನ ಶ್ರೇಣಿ
₹28,000 – ₹35,000 (Gross)
ಅರ್ಜಿ ಕೊನೆಯ ದಿನ
02 ಮಾರ್ಚ್ 2026
ಅಧಿಕೃತ ವೆಬ್‌ಸೈಟ್
rrbapply.gov.in
Group D ನೇಮಕಾತಿ ಯಾಕೆ ಮಹತ್ವದದ್ದು..?
Group D ಹುದ್ದೆಗಳು ಭಾರತೀಯ ರೈಲ್ವೇ ವ್ಯವಸ್ಥೆಯ ಮೂಲ ಅಡಿಪಾಯವಾಗಿವೆ. ರೈಲು ಸಂಚಾರದ ಸುರಕ್ಷತೆ, ನಿರ್ವಹಣೆ, ಕಾರ್ಯಾಚರಣೆ ಹಾಗೂ ತಾಂತ್ರಿಕ ಸಹಾಯ—ರೈಲ್ವೆ ಇಲಾಖೆ Group D ಹುದ್ದೆಗಳು ಮೂಲ ಅಡಿಪಾಯವಾಗಿದೆ ಅಂತ ಹೇಳಬಹುದು. ಈ ಕಾರಣದಿಂದಲೇ ಈ ಹುದ್ದೆಗಳು ಶಾಶ್ವತವಾಗಿರುತ್ತೆ.
ಕಡಿಮೆ ವಿದ್ಯಾರ್ಹತೆಯಲ್ಲಿಯೇ ಕೇಂದ್ರ ಸರ್ಕಾರಿ ಸೇವೆ
ನಿಯಮಿತ ಸಂಬಳ + ಭತ್ಯೆಗಳು
ವೈದ್ಯಕೀಯ, PF, ಪಿಂಚಣಿ ಸೌಲಭ್ಯ
ಕಾಲಕ್ರಮೇಣ ಪ್ರೋತ್ಸಾಹ ಮತ್ತು ಮೇಲ್ದರ್ಜೆ
ಇವೆಲ್ಲವೂ Group D ನೇಮಕಾತಿಯನ್ನು ಅತ್ಯಂತ ಬೇಡಿಕೆಯ ಉದ್ಯೋಗವಾಗಿಸಿವೆ.
ಹುದ್ದೆಗಳ ವಿವರ:
RRB Group D (Level 1) ನೇಮಕಾತಿಯಡಿ ಒಂದೇ ರೀತಿಯ ಕೆಲಸವಲ್ಲ; ವಿವಿಧ ವಿಭಾಗಗಳಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳಿವೆ ಹಾಗೆ ಯಾವಗಳಿಗೆ ಆ ಹುದ್ದೆಗಳು ಎಂಬ ಮಾಹಿತಿ ಈ ಕೆಳಗಿನಂತಿದೆ ಮಾಹಿತಿಯನ್ನು ಗಮನಿಸಿ.
ಸ್ನೇಹಿತರೆ ಗಮನಿಸಿ ಈ ಹುದ್ದೆಯ ಸಿಬ್ಬಂದಿ ರೈಲು ಹಳಿಗಳ ಪರಿಶೀಲನೆ, ದುರಸ್ತಿ ಮತ್ತು ಸುರಕ್ಷತೆಯ ಹೊಣೆ ಹೊರುತ್ತಾರೆ. ರೈಲು ಅಪಘಾತಗಳನ್ನು ತಪ್ಪಿಸುವಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದು. ಈ ಕೆಲಸ ದೈಹಿಕವಾಗಿ ಕಠಿಣವಾದರೂ, ಉದ್ಯೋಗ ಭದ್ರತೆ ಮತ್ತು ಗೌರವ ಹೆಚ್ಚಾಗಿದೆ.
ರೈಲು ಎಂಜಿನ್, ಬೋಗಿಗಳು ಹಾಗೂ ಯಾಂತ್ರಿಕ ವ್ಯವಸ್ಥೆಗಳ ದುರಸ್ತಿ ಮತ್ತು ನಿರ್ವಹಣೆಯಲ್ಲಿ ಸಹಾಯ ಮಾಡುವಂತ ಹುದ್ದೆ
🔹 ಸಹಾಯಕ / ಸಹಾಯಕ ಸಿಬ್ಬಂದಿ – ಸಿಗ್ನಲ್ ಮತ್ತು ದೂರಸಂಪರ್ಕ (S&T)
ಸಿಗ್ನಲ್ ವ್ಯವಸ್ಥೆ, ಸಂವಹನ ಸಾಧನಗಳ ಸುರಕ್ಷತೆ ಮತ್ತು ನಿರ್ವಹಣೆ ಇವರ ಜವಾಬ್ದಾರಿ. ರೈಲು ಸಂಚಾರದ ಸುರಕ್ಷತೆಯಲ್ಲಿ ಈ ವಿಭಾಗದ ಪಾತ್ರ ಅತ್ಯಂತ ಮಹತ್ವದ್ದು.
🔹 ಸಹಾಯಕ ಪಾಯಿಂಟ್ಸ್‌ಮನ್
ರೈಲು ಮಾರ್ಗ ಬದಲಾವಣೆ (Points) ಮತ್ತು ಸಂಚಾರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಹುದ್ದೆ. ಸಮಯಪ್ರಜ್ಞೆ ಮತ್ತು ಎಚ್ಚರಿಕೆ ಅಗತ್ಯ.
🔹 ವರ್ಕ್‌ಶಾಪ್ ಲೆವೆಲ್–1 ಹುದ್ದೆ
ರೈಲ್ವೇ ವರ್ಕ್‌ಶಾಪ್‌ಗಳಲ್ಲಿ ತಾಂತ್ರಿಕ ಸಹಾಯ ಕಾರ್ಯಗಳು.
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಕೆಳಗಿನ ಯಾವುದಾದರೂ ಒಂದು ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತೆ:
ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಪಾಸ್ ಆಗಿರಬೇಕು.
ITI ಪ್ರಮಾಣಪತ್ರ (NCVT ಅಥವಾ SCVT)
NAC – National Apprenticeship Certificate (NCVT)
👉 ಇಲ್ಲಿ ಅಭ್ಯರ್ಥಿಗಳು ಗಮನಿಸಬೇಕಾದ ಅಂಶ: ಡಿಪ್ಲೊಮಾ ಅಥವಾ ಡಿಗ್ರಿ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೇ ಹೆಚ್ಚುವರಿ ಲಾಭವಿಲ್ಲ. Group D ನೇಮಕಾತಿ ಮೂಲ ಮಟ್ಟದ ಉದ್ಯೋಗವಾಗಿರುವುದರಿಂದ 10ನೇ ತರಗತಿ/ITI ಸಾಕಾಗುತ್ತೆ.
ವಯೋಮಿತಿ (01-01-2026ಕ್ಕೆ ಅನ್ವಯ)
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 33 ವರ್ಷ
ವರ್ಗವಾರು ವಯೋಮಿತಿ ಸಡಿಲಿಕೆ:
OBC (Non-Creamy Layer) – 3 ವರ್ಷ
SC / ST – 5 ವರ್ಷ
PwBD (ದಿವ್ಯಾಂಗ ಅಭ್ಯರ್ಥಿಗಳು) – 10 ವರ್ಷ
Ex-Servicemen – ಕೇಂದ್ರ ಸರ್ಕಾರದ ನಿಯಮಾನುಸಾರ
ಸಂಬಳ ಮತ್ತು ಸೇವಾ ಸೌಲಭ್ಯಗಳು:
RRB Group D (Level 1) ಹುದ್ದೆಗಳು ಭಾರತೀಯ ರೈಲ್ವೇಯಲ್ಲಿ 7ನೇ ವೇತನ ಆಯೋಗ (7th Pay Commission) ಅಡಿಯಲ್ಲಿ ಬರುತ್ತವೆ. ಈ ಹುದ್ದೆಗಳಿಗೆ ಸೇರುವ ಅಭ್ಯರ್ಥಿಗಳಿಗೆ ಕೇವಲ ಪ್ರಾರಂಭಿಕ ಸಂಬಳ ಮಾತ್ರವಲ್ಲದೆ, ಜೀವನಪೂರ್ತಿ ಉದ್ಯೋಗ ಭದ್ರತೆ ಮತ್ತು ಸರ್ಕಾರಿ ಸೌಲಭ್ಯಗಳ ಜೊತೆಗೆ ಸಂಪೂರ್ಣ ಪ್ಯಾಕೇಜ್ ಲಭ್ಯವಾಗುತ್ತೆ.
ವೇತನ ರಚನೆ:
ವೇತನ ಮಟ್ಟ (Pay Level): ಲೆವೆಲ್ – 1
ಮೂಲ ಸಂಬಳ (Basic Pay): ₹18,000 ಪ್ರತಿ ತಿಂಗಳು
ಒಟ್ಟು ಸಂಬಳ:
ಪೋಸ್ಟಿಂಗ್ ಪ್ರದೇಶ
ಅಂದಾಜು ಒಟ್ಟು ಸಂಬಳ
ಗ್ರಾಮೀಣ / ಸಣ್ಣ ನಗರ
₹28,000 – ₹30,000
ದೊಡ್ಡ ನಗರ / ಮೆಟ್ರೋ
₹32,000 – ₹35,000
👉 ಒಟ್ಟು ಸಂಬಳವು ಕೆಲಸದ ಸ್ಥಳ, ಮನೆ ಬಾಡಿಗೆ ಭತ್ಯೆ (HRA) ಹಾಗೂ ದರವೃದ್ಧಿ ಭತ್ಯೆ (DA) ಮೇಲೆ ಅವಲಂಬಿತವಾಗಿರುತ್ತದೆ ಇದನ್ನು ಗಮನದಲ್ಲಿಟ್ಟುಕೊಳ್ಳಿ.
ಲಭ್ಯವಿರುವ ಭತ್ಯೆಗಳು (Allowances)
RRB Group D ಉದ್ಯೋಗದಲ್ಲಿ ಕೆಳಗಿನ ಸರ್ಕಾರಿ ಭತ್ಯೆಗಳು ನಿಯಮಾನುಸಾರ ಲಭ್ಯವಾಗುತ್ತವೆ:
ದರವೃದ್ಧಿ ಭತ್ಯೆ (DA) – ಕೇಂದ್ರ ಸರ್ಕಾರದ ಆದೇಶದಂತೆ ಕಾಲಕಾಲಕ್ಕೆ ಹೆಚ್ಚಳ
ಮನೆ ಬಾಡಿಗೆ ಭತ್ಯೆ (HRA) – 8%, 16% ಅಥವಾ 24% (ನಗರ ವರ್ಗೀಕರಣ ಆಧಾರಿತ)
ಸಾರಿಗೆ ಭತ್ಯೆ (TA)
ರಾತ್ರಿ ಕರ್ತವ್ಯ ಭತ್ಯೆ (ಅನ್ವಯವಾದಲ್ಲಿ)
ರೈಲ್ವೇ ವೈದ್ಯಕೀಯ ಸೌಲಭ್ಯಗಳು – ಉದ್ಯೋಗಿ ಹಾಗೂ ಕುಟುಂಬ ಸದಸ್ಯರಿಗೆ
ಭವಿಷ್ಯ ನಿಧಿ (PF)
ರಾಷ್ಟ್ರೀಯ ಪಿಂಚಣಿ ಯೋಜನೆ (NPS)
ಕ್ಯಾಶುಯಲ್ ರಜೆ, ಮೆಡಿಕಲ್ ರಜೆ, ಎಲ್‌ಟಿಸಿ (LTC)
ಅರ್ಜಿ ಶುಲ್ಕ ವಿವರ:
RRB Group D ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ CBT ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಮರುಪಾವತಿ ಮಾಡಲಾಗುತ್ತದೆ.
ವರ್ಗ
ಪಾವತಿಸಬೇಕಾದ ಶುಲ್ಕ
CBT ನಂತರ ಮರುಪಾವತಿ
ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್
₹500
₹400
ಎಸ್‌ಸಿ / ಎಸ್‌ಟಿ
₹250
₹250
ಮಹಿಳಾ ಅಭ್ಯರ್ಥಿಗಳು
₹250
₹250
ದಿವ್ಯಾಂಗ / ಮಾಜಿ ಸೈನಿಕರು
₹250
₹250
👉 CBT ಪರೀಕ್ಷೆಗೆ ಹಾಜರಾಗದ ಅಭ್ಯರ್ಥಿಗಳಿಗೆ ಮರುಪಾವತಿ ಸಿಗುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ.
ಆಯ್ಕೆ ಪ್ರಕ್ರಿಯೆ:
RRB Group D ನೇಮಕಾತಿಯ ಆಯ್ಕೆ ಪ್ರಕ್ರಿಯೆ ಸ್ಪಷ್ಟ, ಪಾರದರ್ಶಕ ಮತ್ತು ಮೆರಿಟ್ ಆಧಾರಿತವಾಗಿದೆ ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನಿಸಿ.
ಹಂತ 1: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಆನ್‌ಲೈನ್ ಪರೀಕ್ಷೆ
ಒಟ್ಟು 100 ಅಂಕ
ಮೆರಿಟ್ ಆಧಾರದ ಮೇಲೆ ಮುಂದಿನ ಹಂತಕ್ಕೆ ಆಯ್ಕೆ
👉 ಈ ಹಂತದಲ್ಲಿ ಪಡೆದ ಅಂಕಗಳು ಅಂತಿಮ ಮೆರಿಟ್‌ಗೆ ಬಹಳ ಮುಖ್ಯವಾಗಿರುತ್ತೆ.
ಹಂತ 2: ದೈಹಿಕ ಸಾಮರ್ಥ್ಯ ಪರೀಕ್ಷೆ:
PET ಪರೀಕ್ಷೆ ಅರ್ಹತಾ ಪರೀಕ್ಷೆ ಮಾತ್ರ. ಅಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ, ಆದರೆ ಈ ಹಂತದಲ್ಲಿ ವಿಫಲರಾದರೆ ನೇಮಕಾತಿಯಿಂದ ಹೊರಗಾಗುತ್ತಾರೆ ಬಹಳ ಎಚ್ಚರವಹಿಸಿ.
ಪುರುಷ ಅಭ್ಯರ್ಥಿಗಳು:
35 ಕೆ.ಜಿ ತೂಕವನ್ನು 100 ಮೀಟರ್ – 2 ನಿಮಿಷಗಳಲ್ಲಿ (ಕೆಳಗಿಡದೆ)
1000 ಮೀಟರ್ ಓಟ – 4 ನಿಮಿಷ 15 ಸೆಕೆಂಡ್
ಮಹಿಳಾ ಅಭ್ಯರ್ಥಿಗಳು:
20 ಕೆ.ಜಿ ತೂಕವನ್ನು 100 ಮೀಟರ್ – 2 ನಿಮಿಷಗಳಲ್ಲಿ
1000 ಮೀಟರ್ ಓಟ – 5 ನಿಮಿಷ 40 ಸೆಕೆಂಡ್
👉 ದೈಹಿಕ ಅಭ್ಯಾಸವಿಲ್ಲದೆ PET ಪರೀಕ್ಷೆ ತೇರ್ಗಡೆಯಾಗುವುದು ಕಷ್ಟ.
ಹಂತ 3: ದಾಖಲೆ ಪರಿಶೀಲನೆ (Document Verification)
PET ತೇರ್ಗಡೆಯಾದ ಅಭ್ಯರ್ಥಿಗಳ ಕೆಳಗಿನ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ:
ಶೈಕ್ಷಣಿಕ ಪ್ರಮಾಣಪತ್ರಗಳು
ವಯೋ / ಜಾತಿ ಸಡಿಲಿಕೆ ಪ್ರಮಾಣಪತ್ರ
ಗುರುತಿನ ಚೀಟಿ
👉 ಯಾವುದೇ ತಪ್ಪು ಅಥವಾ ಅಸಮಂಜಸ ದಾಖಲೆ ಕಂಡುಬಂದರೆ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗುತ್ತದೆ.
ಹಂತ 4: ವೈದ್ಯಕೀಯ ಪರೀಕ್ಷೆ (Medical Examination)
ರೈಲ್ವೇ ಮಾನದಂಡಗಳಂತೆ ವೈದ್ಯಕೀಯ ತಪಾಸಣೆ ನಡೆಯುತ್ತದೆ. ಹುದ್ದೆಯ ಪ್ರಕಾರ ಕೆಳಗಿನ ವೈದ್ಯಕೀಯ ವರ್ಗಗಳು ಅನ್ವಯವಾಗುತ್ತವೆ:
A2
B1
B2
C1
👉 ದೃಷ್ಟಿ, ದೈಹಿಕ ಸ್ಥಿತಿ ಮತ್ತು ಆರೋಗ್ಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ.
CBT ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ:
ಪರೀಕ್ಷೆಯ ಸ್ವರೂಪ
ಪರೀಕ್ಷೆಯ ಅವಧಿ: 90 ನಿಮಿಷ
ಪ್ರಶ್ನೆಗಳ ಸಂಖ್ಯೆ: 100
ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕ ಕಡಿತ
ವಿಷಯವಾರು ಪ್ರಶ್ನೆಗಳ ಹಂಚಿಕೆ
ವಿಷಯ
ಪ್ರಶ್ನೆಗಳು
ಅಂಕ
ಸಾಮಾನ್ಯ ವಿಜ್ಞಾನ
25
25
ಗಣಿತ
25
25
ತಾರ್ಕಿಕ ಚಿಂತನೆ
30
30
ಸಾಮಾನ್ಯ ಜ್ಞಾನ / ಪ್ರಸ್ತುತ ಘಟನೆಗಳು
20
20
ಒಟ್ಟು
100
100
ಅಭ್ಯರ್ಥಿಗಳಿಗೆ ತಯಾರಿ ಸಲಹೆಗಳು
10ನೇ ತರಗತಿ ಮಟ್ಟದ ಪಠ್ಯಪುಸ್ತಕಗಳು ಸಾಕು
ಹಿಂದಿನ RRB Group D ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ
ದಿನನಿತ್ಯದ ಪ್ರಸ್ತುತ ಘಟನೆಗಳನ್ನು ಓದಿ
ಮಾದರಿ ಪರೀಕ್ಷೆಗಳ ಮೂಲಕ ಸಮಯ ನಿರ್ವಹಣೆ ಕಲಿಯಿರಿ
ಅರ್ಜಿ ಪ್ರಾರಂಭ ಮತ್ತು ಕೊನೆ ದಿನಾಂಕ:
ಅರ್ಜಿಯ ಪ್ರಾರಂಭ ದಿನಾಂಕ: 31 ಜನವರಿ 2026
ಅರ್ಜಿಯ ಕೊನೆ ದಿನಾಂಕ: 2 ಮಾರ್ಚ್ 2026 (ರಾತ್ರಿ 11:59 ರವರೆಗೆ)
ನಮ್ಮ ಕೊನೆಯ ಮಾತು:
ನೀವೇನಾದರೂ ಇಲ್ಲಿಯವರೆಗೆ ಈ ಒಂದು ಲೇಖನವನ್ನು ಓದಿದ್ದರೆ ಈ ಒಂದು ಮಾಹಿತಿ ನಿಮಗೆ ಸಹಾಯವಾಗಿದ್ದರೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಏಕೆಂದರೆ ಇಂದಿನ ಈ ಮಾಹಿತಿ ಅವರಿಗೂ ಕೂಡ ಸಹಾಯವಾಗುತ್ತೆ ಅವರು ಕೂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು
Important Links
Access
ಸಂಪೂರ್ಣ ನೋಟಿಫಿಕೇಶನ್ PDF 2026 ಅಧಿಕೃತ ನೋಟಿಫಿಕೇಶನ್ 2025
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು BESCOM 520 ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ ಒಂದಲ್ಲ ಎರಡಲ್ಲ ಒಟ್ಟು 520 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ನೀವೇನಾದರೂ ಬಿಎ ಬಿಕಾಂ ಬಿ ಎಸ್ ಸಿ ಅಥವಾ ಡಿಪ್ಲೋಮಾ ಇನ್ ಟೆಕ್ನಿಷಿಯನ್ ಬಿಇ ಅಥವಾ ಬೇಟೆಕ್ ಆದಂತಹ ಅಭ್ಯರ್ಥಿಗಳಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಿತ್ತಲೇ ಇದೆ ಯಾರು ಕೂಡ ಈ ಒಂದು ಲೇಖನವನ್ನು ಅರ್ಧಂಬರ್ಧ ಓದ್ಬಿಡಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹೀಗಾಗಿ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದು.
ನೋಡಿ ನಿಮಗೆ ಸಾಮಾನ್ಯವಾಗಿ ಯಾವುದೇ ಒಂದು ಪ್ರೈವೇಟ್ ಹುದ್ದೆಯಾಗಲಿ ಅಥವಾ ಗೌರ್ಮೆಂಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಉದ್ಭವ ಆಗುತ್ತೆ ನಾನು ನಿಮಗೆ ಉದಾಹರಣೆ ತಿಳಿಸುವುದಾದರೆ ನೋಡಿ ಅರ್ಜಿ ಸಲ್ಲಿಸಲು ಮುಂದಾದಾಗ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ಸಿಗುತ್ತೆ..? ಈ ಹುದ್ದೆ ಪರಮನೆಂಟ್ ಆಗಿರುತ್ತಾ ಅಥವಾ ಇಲ್ಲ..? ಹಾಗೆ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು..?
ನೋಡಿ ಈ ಮೇಲ್ಗಡೆ ಚಲಿಸುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ನಿಮ್ಮನ್ನ ಕಾಣುತ್ತೆ ಹೀಗಾಗಿ ಇಂದಿನ ಈ ಒಂದು ಲೇಖನದಲ್ಲಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಹತ್ತಿರ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಾಹಿತಿಯನ್ನು ನೀವು ಓದಿ ಹುದ್ದೆಗಳಿಗೆ ಆರಾಮವಾಗಿ ಅರ್ಜಿ ಸಲ್ಲಿಸಬಹುದು ಹಾಗೆ ಯಾವುದೇ ತರಹದ ಪ್ರಶ್ನೆ ನಿಮಗೆ ಮೂಡಿದೆ ಆದಲ್ಲಿ ಸಹಾಯವಾಗಲೆಂದು ಅರ್ಜಿ ಸಲ್ಲಿಸುವ ಅಧಿಕೃತ ವೆಬ್ ಸೈಟ್ ಲೈಕ್ ಹಾಗೆ ನೋಟಿಫಿಕೇಶನ್ ಪಿಡಿಎಫ್ ಲಿಂಕ್ ಒದಗಿಸಿದ್ದೇವೆ ಅಂದರೆ ಇಲಾಖೆಯಿಂದ ಹೊರಡಿಸಿರುವಂತಹ ಅತಿ ಸೂಚನೆ ಪಿಡಿಎಫ್ ಲಿಂಕ್ ಒದಗಿಸಿರುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ ಮಾಹಿತಿಯನ್ನು ತಿಳಿದುಕೊಳ್ಳಬಹುದು ಇನ್ನು ಆಳವಾದ ಮಾಹಿತಿಯನ್ನ.
ಇದೀಗ ಕರ್ನಾಟಕದ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿರುವಂತ BESCOM ಸಂಸ್ಥೆಯಿಂದ 2026ರ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದೆ. ಈ ಪ್ರಕಟಣೆಯ ಮೂಲಕ ಒಟ್ಟು 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇಂಜಿನಿಯರಿಂಗ್ ಪದವೀಧರರು, ಡಿಪ್ಲೋಮಾ ಪಾಸಾದವರು ಮತ್ತು ಸಾಮಾನ್ಯ ಪದವೀಧರರಿಗೆ (B.A, B.Com, B.Sc, B.B.A ಇತ್ಯಾದಿ) ಇದು ದೊಡ್ಡ ಹಾಗೂ ಸುವರ್ಣ ಅವಕಾಶವಾಗಿದೆ ಅಂತ ಹೇಳಬಹುದು.
ಹೆಸರಿನಲ್ಲಿ ಸೂಕ್ಷ್ಮವಾಗಿ ಎಲ್ಲ ಹುದ್ದೆಗಳು ಬೆಂಗಳೂರಿನಲ್ಲಿ ಇದ್ದು ವಿಶೇಷವಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುವ ಅವಕಾಶ ನೀಡುತ್ತದೆ. ಬರಹ ಪರೀಕ್ಷೆ ಇಲ್ಲದೆ, ಮೆರಿಟ್ ಆಧಾರಿತ ಆಯ್ಕೆ ಇರುವುದರಿಂದ, ಹೊಸದಾಗಿ ಪದವಿ/ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ವೇಗವಾಗಿ ಸರ್ಕಾರಿ ಕ್ಷೇತ್ರದ ಅನುಭವ ಪಡೆಯಲು ಇದು ಅತ್ಯಂತ ಉಪಯುಕ್ತ.
ಅಪ್ರೆಂಟಿಸ್ ತರಬೇತಿಯ ಮೂಲಕ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ:
ನೈಜ ಸರ್ಕಾರಿ ಕಾರ್ಯಪದ್ದತಿಯ ಪರಿಚಯ
ಮಾನ್ಯ ಸರ್ಕಾರಿ ಅಪ್ರೆಂಟಿಸ್ ಪ್ರಮಾಣಪತ್ರ
ಭವಿಷ್ಯದ ಶಾಶ್ವತ ಸರ್ಕಾರಿ ಉದ್ಯೋಗಗಳಿಗೆ ಬಲವಾದ ಪ್ರೊಫೈಲ್ ಹೆಚ್ಚಿಸಿಕೊಳ್ಳಬಹುದು. ಉದ್ಯೋಗ ಮಾರುಕಟ್ಟೆಯಲ್ಲಿ ಅನುಭವಕ್ಕೆ ಹೆಚ್ಚಿನ ಮೌಲ್ಯ ಇರುವ ಈ ಸಮಯದಲ್ಲಿ, BESCOM ಅಪ್ರೆಂಟಿಸ್ ನೇಮಕಾತಿ 2026 ಉದ್ಯೋಗಾರ್ಥಿಗಳಿಗೆ ಭದ್ರ ಹಾಗೂ ವಿಶ್ವಾಸಾರ್ಹ ದಾರಿಯನ್ನು ತೆರೆದಿದೆ.
ತ್ವರಿತ ಅಧಿಸೂಚನೆ ಅವಲೋಕನ:
ವಿವರ
ಮಾಹಿತಿ
ಇಲಾಖೆಯ / ಸಂಸ್ಥೆಯ ಹೆಸರು
Bangalore Electricity Supply Company Limited (BESCOM)
ಈ ನೇಮಕಾತಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಆಗಿದೆ. ಪ್ರಕಟಣೆಯ ಪ್ರಕಾರ, 520 ಹುದ್ದೆಗಳು ಕೆಳಗಿನಂತೆ ವಿಂಗಡಿಸಲ್ಪಡುವ ಸದ್ಯತೆ ಇರುತ್ತೆ ಈ ಕೆಳಗಿನಂತಿದೆ ಗಮನಿಸಿ. ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ ಒಂದು ಬಾರಿ ಅರ್ಜಿ ಸಲ್ಲಿಸುವ ಮುನ್ನ:
🔹 ಇಂಜಿನಿಯರಿಂಗ್ ಅಲ್ಲದ ಅಪ್ರೆಂಟಿಸ್ Non-Engineering Graduate Apprentice
B.A, B.Com, B.Sc, B.B.A, B.C.A ಮುಂತಾದ ಸಾಮಾನ್ಯ ಪದವಿಗಳು
ಅಂದಾಜು ಹುದ್ದೆಗಳು: ~170+
ಗಮನಿಸಿ: ನಿಖರ ಶಾಖೆವಾರು ಮತ್ತು ವರ್ಗವಾರು ಹುದ್ದೆಗಳ ವಿವರ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ಹುದ್ದೆಗಳ ಕುರಿತು ನೋಟಿಫಿಕೇಶನ್ ಚೆಕ್ ಮಾಡಬಹುದು.
ಅರ್ಹತಾ ಮಾನದಂಡಗಳು:
ನೋಡಿ ಇದೀಗ ನಾವು ಅರ್ಥ ಮಾಡದಂಡಗಳ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಅಂದರೆ ನಮ್ಮ ಶೈಕ್ಷಣಿಕ ಅರ್ಹತೆ ಹಾಗೂ ನಮ್ಮ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಮಂಡಳಿಯಿಂದ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:
ಮುಖ್ಯ ಶರತ್ತುಗಳು: 👉 ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯನ್ನು 2021ರ ನಂತರ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: BESCOM / ಅಪ್ರೆಂಟಿಸ್ ನಿಯಮಾನುಸಾರ
ವರ್ಗವಾರು ವಯೋಮಿತಿ ಸಡಿಲಿಕೆ:
SC / ST: ನಿಯಮಾನುಸಾರ
OBC: ನಿಯಮಾನುಸಾರ
PwD (ವಿಕಲಚೇತನ): ಹೆಚ್ಚುವರಿ ಸಡಿಲಿಕೆ
ವಯೋಮಿತಿ ಲೆಕ್ಕಾಚಾರ ಅಧಿಸೂಚನೆಯಲ್ಲಿ ನೀಡಿರುವ ದಿನಾಂಕದ ಆಧಾರದಲ್ಲಿ ಮಾಡಲಾಗುತ್ತದೆ.
ವೇತನ (ಸ್ಟೈಪೆಂಡ್) ಮತ್ತು ಸೌಲಭ್ಯಗಳು:
ಇದು ಶಾಶ್ವತ ಉದ್ಯೋಗವಲ್ಲ, ಅಪ್ರೆಂಟಿಸ್ ತರಬೇತಿ ಆದ್ದರಿಂದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ. ಅಂದರೆ ನಿಮಗೆ ಇಂತಿಷ್ಟೇ ಅಥವಾ ಉದಾಹರಣೆಗೆ ತಿಳಿಸಿದರೆ ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಟ್ರೈನಿಂಗ್ ನೀಡುತ್ತಾರೆ ಇದರ ಜೊತೆಗೆ ಪ್ರತಿ ತಿಂಗಳ ಸಂಬಳ ಸಹ ನೀಡುತ್ತಾರೆ ಇದರ ಜೊತೆಗೆ ಎರಡು ವರ್ಷ ಅಂದರೆ ಅಪ್ರೆಂಟಿಶಿಪ್ ಮುಗಿದ ನಂತರ ನಿಮಗೆ ಸರ್ಟಿಫಿಕೇಟ್ ಕೊಟ್ಟು ಕಳುಹಿಸುತ್ತಾರೆ ಬೇರೆಡೆ ಉದ್ಯೋಗವನ್ನು ಹುಡುಕಿಕೊಳ್ಳಲು ಆದರೆ ಇಲ್ಲಿ ನಿಮಗೆ ಅವರು ಕೊಟ್ಟಿರುವಂತ ಸರ್ಟಿಫಿಕೇಟ್ ಬಹಳ ಮುಖ್ಯವಾಗಿರುತ್ತೆ.
ಸ್ಟೈಪೆಂಡ್ ವಿವರ:
Graduate Apprentice: ₹9,008 / ತಿಂಗಳು
Diploma Apprentice: ₹8,000 / ತಿಂಗಳು
Non-Engineering Graduate: ₹9,008 / ತಿಂಗಳು (ಸಾಮಾನ್ಯವಾಗಿ)
ಹೆಚ್ಚುವರಿ ಲಾಭಗಳು:
ಒಂದು ವರ್ಷದ ಸರ್ಕಾರಿ ಮಾನ್ಯತೆ ಪಡೆದ ಅಪ್ರೆಂಟಿಸ್ ಪ್ರಮಾಣಪತ್ರ
ವಿದ್ಯುತ್ ವಿತರಣಾ ಕ್ಷೇತ್ರದ ನೈಜ ಕಾರ್ಯಾನುಭವ
ಭವಿಷ್ಯದ KPTCL, BESCOM, MESCOM, HESCOM, GESCOM ಮೊದಲಾದ ಸಂಸ್ಥೆಗಳ ನೇಮಕಾತಿಗೆ ಸಹಾಯಕ
ಖಾಸಗಿ ಕ್ಷೇತ್ರದಲ್ಲಿಯೂ ಉತ್ತಮ ಉದ್ಯೋಗಾವಕಾಶ
ಅರ್ಜಿ ಶುಲ್ಕ:
ವರ್ಗ
ಶುಲ್ಕ
ಎಲ್ಲಾ ವರ್ಗಗಳು
₹0 (ಶುಲ್ಕ ಇಲ್ಲ)
👉 ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಯಲ್ಲಿ ಯಾವುದೇ ಬರಹ ಪರೀಕ್ಷೆ ಇರುವುದಿಲ್ಲ ಮೆರಿಟ್ ಆಧಾರಿತವಾಗಿರುತ್ತದೆ ಸಂಪೂರ್ಣ ಪ್ರಕ್ರಿಯೆ ಈ ಕೆಳಗಿನಂತಿದೆ.
ಆಯ್ಕೆ ಹಂತಗಳು:
ಮೆರಿಟ್ ಆಧಾರಿತ ಶಾರ್ಟ್‌ಲಿಸ್ಟಿಂಗ್
ಪದವಿ / ಡಿಪ್ಲೋಮಾ ಅಂಕಗಳ ಆಧಾರದಲ್ಲಿ
ದಾಖಲೆ ಪರಿಶೀಲನೆ (Document Verification)
ಅಂತಿಮ ಮೆರಿಟ್ ಪಟ್ಟಿ
ಅಗತ್ಯವಿದ್ದಲ್ಲಿ ಸಂದರ್ಶನ / ವಾಕ್-ಇನ್ ಮಾಹಿತಿ ನೀಡಬಹುದು, ಆದರೆ ಮುಖ್ಯವಾಗಿ ಮೆರಿಟ್ ಆಧಾರವೇ ಪ್ರಮುಖ.
ಪರೀಕ್ಷಾ ಮಾದರಿ & ಸಿಲೆಬಸ್:
ಈ ನೇಮಕಾತಿಗೆ ಬರೆಹ ಪರೀಕ್ಷೆ ಇಲ್ಲ. ಆದ್ದರಿಂದ, ಸಿಲೆಬಸ್ ಅಥವಾ ಪರೀಕ್ಷಾ ಮಾದರಿ ಅನ್ವಯವಾಗುವುದಿಲ್ಲ.
ತಯಾರಿ ಸಲಹೆಗಳು:
ಅಂಕಪಟ್ಟಿಗಳಲ್ಲಿ ತಪ್ಪುಗಳಿಲ್ಲದಂತೆ ಪರಿಶೀಲಿಸಿ
ಎಲ್ಲಾ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್ ಸಿದ್ಧವಾಗಿರಲಿ
NATS ಪ್ರೊಫೈಲ್ ಸಂಪೂರ್ಣವಾಗಿ ಅಪ್‌ಡೇಟ್ ಮಾಡಿ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಘಟನೆ
ದಿನಾಂಕ
ಅಧಿಸೂಚನೆ ಬಿಡುಗಡೆ
07 ಫೆಬ್ರವರಿ 2026
ಅರ್ಜಿ ಆರಂಭ
12 ಫೆಬ್ರವರಿ 2026
ಅರ್ಜಿ ಕೊನೆಯ ದಿನ
02 ಮಾರ್ಚ್ 2026
ಮೆರಿಟ್ ಪಟ್ಟಿ
ನಂತರ ಪ್ರಕಟಣೆ
ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು NATS (National Apprenticeship Training Scheme) ಪೋರ್ಟಲ್ ಬಳಸಬೇಕು.
ಹಂತಗಳು:
1️⃣ ಅಧಿಕೃತ NATS ವೆಬ್‌ಸೈಟ್‌ಗೆ ಭೇಟಿ ನೀಡಿ 2️⃣ ಹೊಸ ಅಭ್ಯರ್ಥಿಗಳು Student Enrollment ಮಾಡಿ 3️⃣ ಲಾಗಿನ್ ಮಾಡಿ 4️⃣ “Bangalore Electricity Supply Company Limited / BESCOM” ಎಂದು ಹುಡುಕಿ 5️⃣ ಸಂಬಂಧಿತ ಅಪ್ರೆಂಟಿಸ್ ಹುದ್ದೆಗೆ Apply ಕ್ಲಿಕ್ ಮಾಡಿ 6️⃣ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ 7️⃣ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ 8️⃣ ಅರ್ಜಿ ಸಲ್ಲಿಸಿ 9️⃣ ದೃಢೀಕರಣ ಪ್ರತಿಯನ್ನು ಪ್ರಿಂಟ್ ಮಾಡಿ
ಅಗತ್ಯ ದಾಖಲೆಗಳ ಪಟ್ಟಿ:
ಆಧಾರ್ ಕಾರ್ಡ್
SSLC / 10ನೇ ತರಗತಿ ಅಂಕಪಟ್ಟಿ
PUC / ಡಿಪ್ಲೋಮಾ / ಪದವಿ ಅಂಕಪಟ್ಟಿಗಳು (ಎಲ್ಲಾ ಸೆಮಿಸ್ಟರ್)
ಪದವಿ / ತಾತ್ಕಾಲಿಕ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
ಆದಾಯ ಪ್ರಮಾಣಪತ್ರ
ಪಾಸ್‌ಪೋರ್ಟ್ ಗಾತ್ರದ ಫೋಟೋ
ಸಹಿ
ಬ್ಯಾಂಕ್ ಖಾತೆ ವಿವರಗಳು
ನಮ್ಮ ಕೊನೆಯ ಮಾತು:
BESCOM ನೇಮಕಾತಿ 2026 ಕರ್ನಾಟಕದ ಯುವ ಪದವೀಧರರಿಗೆ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ. ಯಾವುದೇ ಪರೀಕ್ಷೆಯ ಒತ್ತಡವಿಲ್ಲದೆ, ಸರ್ಕಾರಿ ಕ್ಷೇತ್ರದಲ್ಲಿ ನೈಜ ಅನುಭವ ಪಡೆಯುವ ಈ ಅವಕಾಶವನ್ನು ಅರ್ಹ ಅಭ್ಯರ್ಥಿಗಳು ತಪ್ಪಿಸಿಕೊಳ್ಳಬಾರದು ಎಂದು ಹೇಳುತ್ತಾ ಇಂದಿನ ಈ ಒಂದು ಲೇಖನ ಇಲ್ಲಿಗೆ ಕೊನೆಗೊಳ್ಳುತ್ತೆ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.