10ನೇ ತರಗತಿ ಪಾಸ್ ಆದ ಯುವಕರಿಗೆ ಭಾರಿ ಅವಕಾಶ! KSRTC ಉಚಿತ ಡ್ರೈವಿಂಗ್ ಊಟ, ವಸತಿ ಮತ್ತು ಉಚಿತ ಲೈಸೆನ್ಸ್ ! ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಕರ್ನಾಟಕದ  ಯುವಕರಿಗಾಗಿ ಮತ್ತೊಮ್ಮೆ ಮಹತ್ವದ ಅವಕಾಶ ಲಭ್ಯವಾಗಿದೆ. Karnataka State Road Transport Corporation (KSRTC) ವತಿಯಿಂದ ಉಚಿತ ಹೆವಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ. 

ಹೌದು ಯಾವುದೇ ತರಬೇತಿ ಶುಲ್ಕವಿಲ್ಲದೆ, ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ, ಅಧಿಕೃತ ಭಾರಿ ವಾಹನ ಚಾಲನಾ ಪರವಾನಗಿ (Heavy Vehicle Driving License) ಪಡೆಯುವ ಅವಕಾಶ ಇದಾಗಿದೆ. ಸರ್ಕಾರಿ ಬೆಂಬಲದ ಈ ಕಾರ್ಯಕ್ರಮವು ಸಾರಿಗೆ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ವಿಶೇಷವಾಗಿ ಉಪಯುಕ್ತವಾಗಿದೆ ಅಂತ ಹೇಳಬಹುದು.

WhatsApp Group Join Now
Telegram Group Join Now

ಪ್ರಸ್ತುತ ಈ ಯೋಜನೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ PM-AJAY ಯೋಜನೆಯಡಿ ಪರಿಶಿಷ್ಟ ಜಾತಿ (SC) ವರ್ಗದ ಅಭ್ಯರ್ಥಿಗಳಿಗೆ ವಿಶೇಷವಾಗಿ ಅನ್ವಯಿಸುತ್ತದೆ. ರಾಜ್ಯದ ವಿವಿಧ ತರಬೇತಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಅಧಿಸೂಚನೆ ಸಂಕ್ಷಿಪ್ತ ವಿವರ:

ವಿಷಯವಿವರ
ಸಂಸ್ಥೆ ಹೆಸರುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)
ಯೋಜನೆ ಪ್ರಕಾರರಾಜ್ಯ ಸರ್ಕಾರ ಬೆಂಬಲಿತ ತರಬೇತಿ
ತರಬೇತಿ ಹೆಸರುಉಚಿತ ಹೆವಿ ವಾಹನ ಚಾಲನಾ ತರಬೇತಿ
ಒಟ್ಟು ಸೀಟುಗಳುಕೇಂದ್ರವಾರು ಲಭ್ಯತೆ
ತರಬೇತಿ ಅವಧಿಸುಮಾರು 1 ತಿಂಗಳು
ಅರ್ಜಿ ವಿಧಾನಆನ್‌ಲೈನ್ / ಆಫ್‌ಲೈನ್
ಅರ್ಹತೆಕನಿಷ್ಠ 10ನೇ ತರಗತಿ
ವಯೋಮಿತಿನಿಯಮಾನುಸಾರ
ಅಧಿಕೃತ ವೆಬ್‌ಸೈಟ್ksrtcjobs.karnataka.gov.in

ತರಬೇತಿ ಕೇಂದ್ರಗಳ ವಿವರ:

ಕೆಳಗಿನ ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ ಗಮನಿಸಿ:

  • ಹೊಳಲ್ಕೆರೆ
  • ಮಳವಳ್ಳಿ
  • ಹಾಸನ
  • ಚಿಕ್ಕಮಗಳೂರು
  • ಮಾಲೂರು

ಅಭ್ಯರ್ಥಿಗಳು ತಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಅರ್ಹತಾ ಮಾನದಂಡ ಏನೇನು:

ಶೈಕ್ಷಣಿಕ ಅರ್ಹತೆ:

  • ಕನಿಷ್ಠ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
  • ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತೆ.

ವಯೋಮಿತಿ

  • ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟು ಇರಬೇಕು.
  • ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯಿಸುತ್ತದೆ.

ತರಬೇತಿಯ ಸೌಲಭ್ಯಗಳು ಮತ್ತು ಪ್ರಯೋಜನಗಳು:

  • ಸಂಪೂರ್ಣ ಉಚಿತ ತರಬೇತಿ
  • ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸಹ ಇರುತ್ತೆ.
  • ತರಬೇತಿ ಪೂರ್ಣಗೊಳಿಸಿದ ಬಳಿಕ RTO ಸಹಯೋಗದೊಂದಿಗೆ ಹೆವಿ ವಾಹನ DL ಸಿಗುತ್ತೆ.
  • ಅನುಭವಿಗಳಾದ KSRTC ತರಬೇತುದಾರರಿಂದ ಪ್ರಾಯೋಗಿಕ ಮತ್ತು ತಾಂತ್ರಿಕ ಮಾರ್ಗದರ್ಶನ ದೊರೆಯುತ್ತದೆ.

ಈ ತರಬೇತಿ ಮೂಲಕ ಯುವಕರು ಭಾರಿ ವಾಹನ ಚಾಲನಾ ಕೌಶಲ್ಯಗಳನ್ನು ಪಡೆದು, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉತ್ತಮ ವೇತನದ ಉದ್ಯೋಗಗಳಿಗೆ ಅರ್ಹರಾಗುತ್ತಾರೆ.

ಆಯ್ಕೆ ಪ್ರಕ್ರಿಯೆ ಹೇಗೆ:

  1. ಅರ್ಜಿ ಪರಿಶೀಲನೆ
  2. ದಾಖಲೆ ಪರಿಶೀಲನೆ
  3. ಅರ್ಹ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ಮಾಹಿತಿ
  4. ತರಬೇತಿಗೆ ಪ್ರವೇಶ

ಲಿಖಿತ ಪರೀಕ್ಷೆ ಇಲ್ಲ. ಸಂದರ್ಶನ ಇಲ್ಲ. ಅರ್ಹತೆ ಆಧಾರಿತ ಆಯ್ಕೆ ಆಗಿರುತ್ತದೆ.

ಬೇಕಾದ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • SSLC ಅಂಕಪಟ್ಟಿ
  • ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
  • LMV ಚಾಲನಾ ಲೈಸೆನ್ಸ್ (ಇದ್ದರೆ ಉತ್ತಮ)
  • ಇನ್ನು ಹೆಚ್ಚಿನ ಮಾಹಿತಿ ಕೇಳಿದರೆ ನೀಡಬೇಕು.

ಅರ್ಜಿ ಸಲ್ಲಿಸುವ ವಿಧಾನ

ಆನ್‌ಲೈನ್ ಮೂಲಕ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಹೊಸ ನೋಂದಣಿ ಮಾಡಿ.
  3. ಅಗತ್ಯ ವಿವರಗಳನ್ನು ಭರ್ತಿ ಮಾಡಿ.
  4. ದಾಖಲೆಗಳನ್ನು ಅಪ್ಲೋಡ್ ಮಾಡಿ.
  5. ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ಪಡೆಯಿರಿ.

ಆಫ್‌ಲೈನ್ ಮೂಲಕ

  • ಹತ್ತಿರದ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
  • ಅಥವಾ ಅಧಿಕೃತ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಆನ್ಲೈನ್ ಮೂಲಕ.

ದೊರೆಯುವ ಉದ್ಯೋಗ ಅವಕಾಶಗಳು:

ನೋಡಿ ತರಬೇತಿ ಪೂರ್ಣಗೊಂಡ ನಂತರ:

  • KSRTC ಮತ್ತು ಇತರೆ ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ  ಅವಕಾಶಗಳು ದೊರೆಯುತ್ತದೆ. 
  • ಖಾಸಗಿ ಬಸ್ ಕಂಪನಿಗಳು
  • ಲಾರಿ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳು
  • ಪ್ರವಾಸೋದ್ಯಮ ಕ್ಷೇತ್ರ

ಭಾರಿ ವಾಹನ ಚಾಲಕರಿಗೆ ದೇಶದಾದ್ಯಂತ ಹೆಚ್ಚಿನ ಬೇಡಿಕೆ ಇದೆ.

ಅರ್ಜಿ ಸಲ್ಲಿಸಲು ಸಹಾಯವಾಣಿ ಸಂಖ್ಯೆಗಳು

  • ಮಳವಳ್ಳಿ: 7760990137
  • ಹಾಸನ: 7760990533
  • ಹೊಳಲ್ಕೆರೆ: 7019072560
  • ಮಾಲೂರು: 7760994432
  • ಚಿಕ್ಕಮಗಳೂರು: 9606037746

ಅರ್ಜಿ ಮುಖ್ಯ ದಿನಾಂಕ

ಸಾಮಾನ್ಯವಾಗಿ ಇಂತಹ ತರಬೇತಿ ಅಧಿಸೂಚನೆಗಳಿಗೆ 15 ರಿಂದ 20 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20, 2026ರೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.

ಗಮನಿಸಿ ಫೆಬ್ರವರಿ 20 ಇಲಾಖೆ ನಿಗದಿಪಡಿಸಿರುವ ಕೊನೆಯ ದಿನಾಂಕ ವಾಗಿರುತ್ತದೆ.

ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:

  • ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿ.
  • ಕೊನೆಯ ದಿನದವರೆಗೆ ಕಾಯಬೇಡಿ.
  • ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಿರಿ.
  • ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಅನುಮಾನಗಳನ್ನು ನಿವಾರಿಸಿಕೊಳ್ಳಿ ಈಗಾಗಲೇ ಸಹಾಯವಾಣಿ ಈ ಮೇಲ್ಗಡೆ ನೀಡಲಾಗಿದೆ.

ನಮ್ಮ ಕೊನೆಯ ಮಾತು:

ಉದ್ಯೋಗಕ್ಕಾಗಿ ಹುಡುಕುತ್ತಿರುವ ಯುವಕರಿಗೆ KSRTC ಉಚಿತ ಹೆವಿ ವಾಹನ ತರಬೇತಿ ದೊಡ್ಡ ಅವಕಾಶವಾಗಿದೆ. ಯಾವುದೇ ಶುಲ್ಕವಿಲ್ಲದೆ ಕೌಶಲ್ಯಾಭಿವೃದ್ಧಿ ಮಾಡಿ, ಅಧಿಕೃತ ಚಾಲನಾ ಪರವಾನಗಿ ಪಡೆದು, ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಬಹುದು ಹಾಗೆ ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೆ ತಕ್ಷಣ ಅರ್ಜಿ ಸಲ್ಲಿಸಬೇಕು.ಯಾಕಂದ್ರೆ ಕೊನೆ ದಿನಾಂಕ 20 ಫೆಬ್ರವರಿ 2026.

 FAQ:

1. ಈ ತರಬೇತಿ ಸಂಪೂರ್ಣ ಉಚಿತವೇ?
ಹೌದು, ಯಾವುದೇ ಶುಲ್ಕವಿಲ್ಲ.

2. ಊಟ ಮತ್ತು ವಸತಿ ಸೌಲಭ್ಯ ಇದೆಯೇ?
ಹೌದು, ತರಬೇತಿ ಅವಧಿಯಲ್ಲಿ ಉಚಿತವಾಗಿ ನೀಡಲಾಗುತ್ತದೆ.

3. ಲಿಖಿತ ಪರೀಕ್ಷೆ ಇದೆಯೇ?
ಇಲ್ಲ.

4. ಯಾರು ಅರ್ಜಿ ಸಲ್ಲಿಸಬಹುದು?
ಪರಿಶಿಷ್ಟ ಜಾತಿ ವರ್ಗದ ಅರ್ಹ ಅಭ್ಯರ್ಥಿಗಳು.

5. ತರಬೇತಿ ಅವಧಿ ಎಷ್ಟು?
ಸುಮಾರು ಒಂದು ತಿಂಗಳು.

6. ಹೆವಿ ವಾಹನ DL ನೀಡಲಾಗುತ್ತದೆಯೇ?
ಹೌದು, ತರಬೇತಿ ಪೂರ್ಣಗೊಂಡ ಬಳಿಕ.

7. ವಯೋಮಿತಿ ಏನು?
ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟು.

8. LMV ಲೈಸೆನ್ಸ್ ಕಡ್ಡಾಯವೇ?
ಇದ್ದರೆ ಉತ್ತಮ, ಆದರೆ ಕಡ್ಡಾಯವಲ್ಲ.

9. ಆಯ್ಕೆ ಹೇಗೆ?
ಅರ್ಹತೆ ಮತ್ತು ದಾಖಲೆ ಪರಿಶೀಲನೆ ಆಧಾರಿತ.

10. ಅರ್ಜಿ ಶುಲ್ಕ ಇದೆಯೇ?
ಇಲ್ಲ.

Leave a Comment